ರಮಿನ್ ಜವಾದಿ (ಜುಲೈ 19,1974 ರಂದು ಜನನ) ಒರ್ವ ಸ೦ಗೀತ ಸಂಯೋಜಕ. ಗೇಮ್ ಆಫ್ ಥ್ರೋನ್ಸ್ನಲ್ಲಿನ ಇವರ ಸ೦ಯೋಜನೆ ಇವರಿಗೆ ಬಹಳ ಮೆಚ್ಚುಗೆಗಳಿಸಿ ಪ್ರಸಿದ್ಧಿಯನ್ನು ತಂದುಕೊತ್ತಿತು. ಕ್ಲಾಷ್ ಆಫ್ ದ ಟೈಟಾನ್ಸ್, ಪೆಸಿಫಿಕ್ ರಿಮ್, ವಾರ್ಕ್ರಾಫ್ಟ್ , ಐರನ್ಮ್ಯಾನ್ , ಪ್ರಿಸನ್ ಬ್ರೇಕ್, ವೆಸ್ಟ್ವರ್ಲ್ಡ್ ಇನ್ನು ಹಲವಾರು ಚಲನಚಿತ್ರ ಹಾಗು ಸರಣಿಗಳಿಗೆ ಸ೦ಗೀತ ಸ೦ಯೋಜಿಸಿ ಸುಪರಿಚಿತರಾಗಿದ್ದಾರೆ. == ಆರಂಭಿಕ ಜೀವನ == ಜವಾದಿ ಪಶ್ಚಿಮ ಜರ್ಮನಿಯ ಡುಯಿಸ್ಬರ್ಗ್ನಲ್ಲಿ ಜನಿಸಿದರು. ಇವರ ತಂದೆ ಇರಾನಿನವರು ಮತ್ತು ತಾಯಿ ಜರ್ಮನ್. ಬರ್ಕ್ಲಿ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಅಧ್ಯಯನ ಮಾಡಿದ್ದಾರೆ. == ವೈಯಕ್ತಿಕ ಜೀವನ == ಮ್ಯೂಸಿಕ್ ಎಕ್ಸಿಕ್ಯೂಟಿವ್ ಆಗಿರುವ ಜೆನ್ನಿಫರ್ ಹಾಕ್ಸ್ , ಜವಾದಿ ಪತ್ನಿ. ಜವಾದಿ ಪ್ರಕಾರ ಅವರಿಗೆ ಸಂಗೀತದೊಂದಿಗೆ ಬಣ್ಣಗಳು, ಅಥವಾ ಬಣ್ಣಗಳೊಂದಿಗೆ ಸಂಗೀತವನ್ನು ಸಂಬಂಧಿಸಿಕೊಳ್ಳುವಂತಹ ಸಿನಸ್ತೆಶಿಯಾ ಎ೦ಬ ಸಂವೇದನಾ ಸ್ಥಿತಿಯಿದೆ ಎ೦ದು ಹೇಳಿದ್ದಾರೆ ಮತ್ತು ಇದು ಸಂಗೀತವನ್ನು ದೃಶ್ಯೀಕರಿಸುವುದುಕ್ಕೆ ಅವರಿಗೆ ಅನುವು ಮಾಡಿಕೊಡುತ್ತದಂತೆ . == ಉಲ್ಲೇಖಗಳು ==